ನವದೆಹಲಿ : ಪಾಠ ಹೇಳಿಕೊಡಲು ಮನೆಗೆ ಬಂದ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಬಾತ್ರೂಮ್ ನಲ್ಲಿ ಅಡಗಿಸಿಟ್ಟು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ವಿದ್ಯಾರ್ಥಿಗೆ ಎರಡು ತಿಂಗಳಿನಿಂದ ಭೋದನೆ ಮಾಡುತ್ತಿದ್ದ 35 ವರ್ಷ ವಯಸ್ಸಿನ ಶಿಕ್ಷಕ ಮನೆಯಲ್ಲಿ ಯಾರು ಇಲ್ಲದಿರುವ ವೇಳೆ ಹೈಡ್ ಆ್ಯಂಡ್ ಸೀಕ್ ಆಟವನ್ನು ಆಡೋಣ ಎಂದು ಹೇಳಿ ಹುಡುಗನನ್ನು ಬಾತ್ರೂಮ್ ಒಳಗೆ ಕರೆದುಕೊಂಡು ಹೋಗಿ ಅಡಗಿಸಿಟ್ಟಿದ್ದಾನೆ. ಅಲ್ಲಿ ಹುಡುಗನನ್ನು ಅನುಚಿತವಾಗಿ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.