ಚುನಾವಣಾ ಪ್ರಚಾರಕ್ಕೆಂದು ಕರೆತಂದ ಮಹಿಳೆಗೆ ಶಾಸಕ ಮಾಡಿದ್ದೇನು?

ಉತ್ತರ ಪ್ರದೇಶ| pavithra| Last Modified ಸೋಮವಾರ, 19 ಅಕ್ಟೋಬರ್ 2020 (07:08 IST)
: ಪೂರ್ವ ಉತ್ತರ ಪ್ರದೇಶದ ಭಾದೋಹಿ ಜಿಲ್ಲೆಯ ಗೋಪಿಗಂಜ್ ಪೊಲೀಸ್ ಠಾಣೆಯ ಜೈಲಿನಲ್ಲಿರುವ ಜ್ಞಾನಪುರ-ಭಾದೋಹಿ ಶಾಸಕ ವಿಜಯ್ ಮಿಶ್ರಾ , ಅವರ ಮಗ ಹಾಗೂ ಇನ್ನೊಬ್ಬ ಸಂಬಂಧಿ ವಿರುದ್ಧ ಮಹಿಳೆಯೊಬ್ಬಳು ಸಾಮೂಹಿಕ ಅತ್ಯಾಚಾರದ ದೂರು ದಾಖಲಿಸಿದ್ದಾಳೆ.
2014ರಲ್ಲಿ ಮಿಶ್ರಾ ತನ್ನ ಮೇಲೆ ಗನ್ ಪಾಯಿಂಟ್ ಇಟ್ಟು ಬೆದರಿಸಿ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೇ ಆತನ ಮಗ ವಿಷ್ಣು ಮಿಶ್ರಾ ಮತ್ತು ಆತನ ಸಂಬಂಧಿ ವಿಕಾಸ್ ಮಿಶ್ರಾ ಕೂಡ ತನ್ನ ಮೇಲೆ ಮಾನಭಂಗ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ. 2014ರ ಚುನಾವಣೆಯಲ್ಲಿ ವಾರಣಾಸಿಯ ಈ ಮಹಿಳೆಯನ್ನು ಪ್ರಚಾರಕ್ಕಾಗಿ ಕರೆತರಲಾಗಿತ್ತು ಎನ್ನಲಾಗಿದೆ.> > ಮಹಿಳೆಯ ದೂರಿನ ಆಧಾರದ ಮೇಲೆ ಈಗಾಗಲೇ ಆಸ್ತಿ ಕಳ್ಳತನ ಪ್ರಕರಣದಲ್ಲಿ ಜೈಲಿನಲ್ಲಿರುವ ವಿಜಯ್ ಮಿಶ್ರಾ ಹಾಗೂ ಅವರ ಮಗ ಮತ್ತು ಸಂಬಂಧಿ ವಿರುದ್ಧ ಪೊಲೀಸರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :