ಅಜ್ಜ-ಮೊಮ್ಮಗ ಸೇರಿ ಬಾಲಕಿ ಮೇಲೆ ಹೀಗಾ ಮಾಡೋದು

ಚಂಡೀಗರ್| pavithra| Last Modified ಶನಿವಾರ, 24 ಅಕ್ಟೋಬರ್ 2020 (08:43 IST)
ಚಂಡೀಗರ್: ಹಾಗೂ ಮೊಮ್ಮಗ ಸೇರಿ  6 ವರ್ಷದ ಬಾಲಕಿಯ ಮೇಲೆ ಮಾನಭಂಗ ಎಸಗಿ ಬಳಿಕ ಆಕೆಯನ್ನು ಜೀವಂತವಾಗಿ ಸುಟ್ಟು ಕೊಂದ ಘಟನೆ ಪಂಜಾಬ್ ನ ತಾಂಡಾದ ಹಳ್ಳಿಯಲ್ಲಿ ನಡೆದಿದೆ.

ಮನೆಯಲ್ಲಿದ್ದ ಬಾಲಕಿಗೆ ಬಿಸ್ಕತ್ತು ನೀಡುವ ನೆಪದಲ್ಲಿ ಮನೆಯಿದ ಕರೆದುಕೊಂಡು ಹೋದ ಆರೋಪಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಆಕೆಯನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ. ಬಾಲಕಿ ನಾಪತ್ತೆಯಾದ ಹಿನ್ನಲೆಯಲ್ಲಿ ಆಕೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಹುಡುಕಾಟದಲ್ಲಿ ತೊಡಗಿದ್ದಾಗ ಆಕೆಯ ಅರ್ಧ ಸುಟ್ಟ ದೇಹವು ಆರೋಪಿಗಳ ಹವೇಲಿಯಲ್ಲಿ ಪತ್ತೆಯಾಗಿದೆ.

ತಕ್ಷಣ ಪೊಲೀಸರು ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :