ಅಹಮದಾಬಾದ್:ಇಂದು ಭಾರತಕ್ಕೆ ಭೇಟಿ ನೀಡಿದ ಟ್ರಂಪ್ ಗುಜರಾತ್ ನ ಮೊಟೆರಾ ಸ್ಟೇಡಿಯಂನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾರತದ ಕುರಿತು, ಮೋದಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ನಮಸ್ತೆ ಎಂದು ಭಾಷಣ ಆರಂಭಿಸಿದ ಡೊನಾಲ್ಡ್ ಟ್ರಂಪ್ ನರೇಂದ್ರ ಮೋದಿ ನನ್ನ ನಿಜವಾದ ಸ್ನೇಹಿತ ಎಂದು ಹೇಳಿದರು. ಮೋದಿ ನನ್ನ ಸ್ನೇಹಿತ ಎಂದು ಹೇಳಲು ಹೆಮ್ಮೆಯಾಗುತ್ತಿದೆ. 8 ಸಾವಿರ ಕೀ.ಮೀ ಪ್ರಯಾಣಿಸಿ ಇಲ್ಲಿಗೆ ಬಂದಿದ್ದೇವೆ. ಅಮೆರಿಕ ಎಂದೆಂದೂ ಭಾರತವನ್ನು ಗೌರವಿಸುತ್ತೆ, ಪ್ರೀತಿಸುತ್ತೆ ಎಂದು