Widgets Magazine

ಮನೆಯಿಂದ ಓಡಿಹೋದ ಹುಡುಗಿಗೆ ಕೊನೆಗೆ ಆಗಿದ್ದೇನು ಗೊತ್ತಾ?

ಒಡಿಶಾ| pavithra| Last Modified ಗುರುವಾರ, 15 ಅಕ್ಟೋಬರ್ 2020 (12:21 IST)
ಒಡಿಶಾ : ಮನೆಯಿಂದ ಓಡಿಹೋದ 17 ವರ್ಷದ ಹುಡುಗಿಯನ್ನು ವ್ಯಕ್ತಿಯೊಬ್ಬ ಅಪಹರಿಸಿ 22 ದಿನಗಳ ಕಾಲ ಮಾನಭಂಗ ಎಸಗಿದ ಘಟನೆ ಒಡಿಶಾದ ಕಟಕ್ ನಲ್ಲಿ ನಡೆದಿದೆ.

ಜಗತ್ಸಿಂಗ್ ಪುರ ಜಿಲ್ಲೆಯ ಟಿರ್ಟಾಲ್ ನಿವಾಸಿಯಾದ ಹುಡುಗಿ ತನ್ನ ಹೆತ್ತವರ ಜೊತೆ ಜಗಳವಾಡಿ ಮನೆಬಿಟ್ಟು ಬಂದಿದ್ದಾಳೆ. ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಹುಡುಗಿಯನ್ನು ವ್ಯಕ್ತಿಯೊಬ್ಬ ಮನೆಗೆ ಕರೆದುಕೊಂಡು ಹೋಗುವುದಾಗಿ ಗತಿರೌಟ್ ಪಟ್ನಾ ಗ್ರಾಮದಲ್ಲಿರುವ ಕೋಳಿ ಸಾಕಾಣೆ ಕೇಂದ್ರಕ್ಕೆ ಕರೆದುಕೊಂಡು ಹೋಗಿ 22 ದಿನಗಳ ಕಾಲ ಕೋಣೆಯಲ್ಲಿ ಕೂಡಿ ಹಾಕಿ ತನ್ನ ಗೆಳೆಯನ ಜೊತೆ ಸೇರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.  

ಅನುಮಾನಗೊಂಡ ಸ್ಥಳೀಯರು ಪೊಲೀಸರೊಂದಿಗೆ ದಾಳಿ ನಡೆಸಿ ಹುಡುಗಿಯನ್ನು ರಕ್ಷಿಸಿ ಅನಾಥಾಶ್ರಮಕ್ಕೆ ಕಳುಹಿಸಲಾಗಿದೆ. ಹಾಗೇ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಪರಾರಿಯಾಗಿದ್ದು ಆತನನ್ನು ಬಂಧಿಸಲು ಪೊಲೀಸರು ತಂಡ ರಚಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :