ಭಾರತದಲ್ಲಿ, ಮದುವೆ ಎನ್ನುವುದು ಕೇವಲ ಇಬ್ಬರ ಸಮ್ಮೀಲನವಲ್ಲ. ಬದಲಾಗಿ ಎರಡು ಕುಟುಂಬಗಳನ್ನು ಜತೆಗೂಡಿಸುವ ಒಂದು ಬಂಧನ. ಎಲ್ಲಾ ಸಿದ್ಧತೆಗಳ ಮತ್ತು ಆಹ್ಲಾದಕರ ಆಚರಣೆಯ ನಡುವೆ, ವಧು ಮತ್ತು ವರರು ತಾವಿಬ್ಬರು ಜತೆಯಾಗಿ ಎದುರಿಸಬೇಕಾಗಿರುವ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯ ಕೂಡ ಇದೆ.