ಬೆಂಗಳೂರು : ಟಿಸಿಎಸ್ ಬಳಿಕ ಇನ್ಫೋಸಿಸ್ ಈಗ ಉದ್ಯೋಗಿಗಳಿಗೆ ಕಚೇರಿಗೆ ಬರುವಂತೆ ಆದೇಶಿಸಿದೆ.ಹಂತ ಹಂತವಾಗಿ ಉದ್ಯೋಗಿಗಳು ಕಚೇರಿ ಬರುವಂತೆ ಮಾನವ ಸಂಪನ್ಮೂಲ ವಿಭಾಗ ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದೆ.ಆರಂಭದಲ್ಲಿ ವಾರದ ಎರಡು ದಿನ ಕಚೇರಿಗೆ ಬರುವಂತೆ ಸೂಚಿಸಲಾಗಿದೆ. ಎರಡನೇ ಹಂತದಲ್ಲಿ ಉದ್ಯೋಗಿಗಳಿಗೆ ಅವರ ಆಯ್ಕೆಯ ಸ್ಥಳಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಕೊನೆಯ ಹಂತದಲ್ಲಿ ಮೊದಲ ಮತ್ತು ಎರಡು ಹಂತದ ಬಗ್ಗೆ ಉದ್ಯೋಗಿಗಳಿಗೆ ಪ್ರತಿಕ್ರಿಯೆ ಪಡೆದು ನಿರ್ಧಾರ ತೆಗೆದುಕೊಳ್ಳಲಿದೆ. ಇನ್ಫೋಸಿಸ್ ಕಂಪನಿ ವಿಶ್ವದ 54 ದೇಶಗಳ