ಬಜೆಟ್ ಮಂಡನೆ ದಿನ ಬಜೆಟ್ ಪ್ರತಿಯನ್ನು ಹಿಡಿದುಕೊಂಡು ಹಣಕಾಸು ಸಚಿವರು ಸಂಸತ್ತಿಗೆ ಬರುವುದು ಹಲವು ದಶಕಗಳಿಂದ ನಡೆದು ಬಂದ ರೂಢಿ. ಬ್ರೀಫ್ಕೇಸ್ನಲ್ಲಿ ಬಜೆಟ್ ಪ್ರತಿ ಇಟ್ಟುಕೊಂಡು ಬರುವ ಸಂಪ್ರದಾಯ ಭಾರತಕ್ಕೆ ಇಂಗ್ಲೆಂಡ್ನಿಂದ ಬಳುವಳಿ. ಇಂಗ್ಲೆಂಡಿನ ಬಜೆಟ್ ಮುಖ್ಯಸ್ಥರಾಗಿದ್ದ ವಿಲಿಯಂ ಗ್ಲಾಡ್ಸ್ಟೋನ್ ಅವರು ಈ ಸಂಪ್ರದಾಯವನ್ನು ಆರಂಭಿಸಿದ್ದರು. ಅವರ ಬಜೆಟ್ ಭಾಷಣ ಭಾರೀ ಉದ್ದವಾಗಿ ಇದ್ದಿದ್ದರಿಂದ, ಹಲವು ಪುಟಗಳಲ್ಲಿ ಭಾಷಣವನ್ನು ಮುದ್ರಿಸಲಾಗುತ್ತಿತ್ತು.2019ರ ವರೆಗೂ ಭಾರತದಲ್ಲಿ ಬಜೆಟ್ ಪ್ರತಿಯನ್ನು ಬ್ರೀಫ್ಕೇಸ್ನಲ್ಲಿಯೇ ತರಲಾಗುತ್ತಿತ್ತು.