ವಾಕಿಂಗ್ ಮಾಡುತ್ತಿದ್ದ ಯುವತಿಗೆ ಹಿಂದಿನಿಂದ ಬಂದ ಬೈಕ್ ಸವಾರ ಹೀಗಾ ಮಾಡೋದು?

ಗುಜರಾತ್| pavithra| Last Modified ಶುಕ್ರವಾರ, 23 ಅಕ್ಟೋಬರ್ 2020 (08:34 IST)
ಗುಜರಾತ್ : 22 ವರ್ಷದ ಯುವತಿಯೊಬ್ಬಳು ಸಂಜೆ ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಗುಜರಾತ್ ನ ಸ್ಯಾಟಲೈಟ್ ಪ್ರದೇಶದಲ್ಲಿ ನಡೆದಿದೆ.  
ಯುವತಿ ವಾಕಿಂಗ್ ಮಾಡುತ್ತಿದ್ದಾಗ ಹಿಂದಿನಿಂದ ಬೈಕ್ ನಲ್ಲಿ ಬಂದ ವ್ಯಕ್ತಿ ಮಹಿಳೆಯನ್ನು ಅನುಚಿತವಾಗಿ ಮುಟ್ಟಿ ಪರಾರಿಯಾಗಿದ್ದಾನೆ. ಯುವತಿ ಮನೆಗೆ ಹೋಗಿ ಈ ವಿಚಾರವನ್ನು ಕುಟುಂಬಕ್ಕೆ ತಿಳಿಸಿದ್ದಾಳೆ. > > ಈ ಬಗ್ಗೆ ಯುವತಿ ಆನಂದನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಸವಾರನ ವಿರುದ್ಧ ದೂರು ದಾಖಲಿಸಿದ್ದಾರೆ. ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ಅಲ್ಲಿನ ಸುತ್ತಮುತ್ತಲಿನ ಸಿಸಿಟಿವಿ ತುಣುಕನ್ನು ವೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :