Widgets Magazine

ಫೋನ್ ಮಾಡಿದ್ರೆ ಅಧಿಕಾರಿಗಳ ಪ್ಯಾಂಟ್‌ ಒದ್ದೆಯಾಗ್ಬೇಕು: ರಾಮ್‌ಜೀ ಲಾಲ್

ಹಥ್ರಾಸ್‍| Jaya| Last Updated: ಬುಧವಾರ, 23 ಏಪ್ರಿಲ್ 2014 (20:36 IST)
ತನ್ನ ದೂರವಾಣಿ ಕರೆ ಸ್ವೀಕರಿಸಿದ ಅಧಿಕಾರಿಯ ಪ್ಯಾಂಟ್ ತೇವವಾಗಿಸುವ ಸಾಮರ್ಥ್ಯ ಹೊಂದಿರದ ಸಂಸದನಿಗೆ ಯಾವ ಮೌಲ್ಯವಿದೆ ಎಂದು ಸಮಾಜವಾದಿ ಪಕ್ಷದ ಅಭ್ಯರ್ಥಿ ಹೇಳಿದ್ದಾರೆ. 
 
"ಸಂಸದರಾದರೆ ನಾವು ಬಿಗಿಯಾಗಿ ಅಧಿಕಾರವನ್ನು ಚಲಾಯಿಸಬೇಕು, ಅದನ್ನು ಜನರು ಮೆಚ್ಚುತ್ತಾರೆ" ಎಂದು ಹಥ್ರಾಸ್‍ನಿಂದ ಕಣಕ್ಕಿಳಿಯುತ್ತಿರುವ ಅಭ್ಯರ್ಥಿ ರಾಮ್‌ಜೀ ಲಾಲ್ ಸುಮನ್ ನೀಡಿದ ಹೇಳಿಕೆ ವಿಡಿಯೋಗಳಲ್ಲಿ ದಾಖಲಾಗಿದೆ. 
 
ಹಥ್ರಾಸ್‍ನಲ್ಲಿ ಚುನಾವಣಾ ಪ್ರಚಾರ ಮಾಡುತ್ತ ಮಾತನಾಡುತ್ತಿದ್ದ ಅವರು "ತನ್ನ ಒಂದು ಪೋನ್ ಕರೆಯಿಂದ ಅಧಿಕಾರಿಯ ಪ್ಯಾಂಟ್‌ನ್ನು ಒದ್ದೆ ಮಾಡಲಾಗದ ಸಂಸದನಿಂದ ಏನು ಪ್ರಯೋಜನ"? ಎಂದು ಪ್ರಶ್ನಿಸಿದ್ದಾರೆ. 
 
ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿರುವ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ರಾಮ್‌ಜೀ ಲಾಲ್ ಸುಮನ್, ಪಕ್ಷದ ನಾಯಕ ಮುಲಾಯ್ ಸಿಂಗ್ ಯಾದವರಿಗೆ ತುಂಬಾ ಆಪ್ತರಾಗಿದ್ದಾರೆ. ಇದರಲ್ಲಿ ಇನ್ನಷ್ಟು ಓದಿ :