ಮುಂಬೈ: 26/11 ರ ಮುಂಬೈ ದಾಳಿಯನ್ನು ಯಾರು ಮರೆಯಲು ಸಾಧ್ಯ ಹೇಳಿ? ಆ ದಾಳಿಯ ಸಂದರ್ಭದಲ್ಲಿ ಸೆರೆ ಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ ನನ್ನು ನೇಣಿಗೇರಿಸಿಯಾಗಿದೆ.ಆದರೆ ನೇಣುಗಂಬಕ್ಕೇರುವ ಮೊದಲು ಕಸಬ್ ಏನೆಂದು ಹೇಳಿದ್ದ ಗೊತ್ತೇ? ಈ ಸಂದರ್ಭದಲ್ಲಿ ಕಸಬ್ ನನ್ನು ತನಿಖೆ ಮಾಡಿದ್ದ ಅಧಿಕಾರಿಗಳ ತಂಡದ ಮುಖ್ಯಸ್ಥರಾಗಿದ್ದು, ಈಗ ನಿವೃತ್ತಿಯಾಗಿರುವ ರಮೇಶ್ ಮಹಾಳೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಕಸಬ್ ಗೆ ಕೋರ್ಟ್ ನಿಂದ ಮರಣದಂಡನೆ ವಾರಂಟ್ ನೀಡುವಾಗಲೂ ಆತ