ಪುಣೆ: ಅಪಘಾತವಾದಾಗ ತಕ್ಷಣ ಆಸ್ಪತ್ರೆಗೆ ಸೇರಿಸಬೇಕೆಂದು ಪೊಲೀಸರು, ಸರ್ಕಾರ ಅದೆಷ್ಟೇ ಯೋಜನೆಗಳು, ಸಲಹೆಗಳನ್ನು ನೀಡಿದರೂ, ಜನ ಸಾಮಾನ್ಯರು ಮಾತ್ರ ಬದಲಾಗಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.ಪುಣೆ ಹೆದ್ದಾರಿಯಲ್ಲಿ ಅಪಘಾತಕ್ಕೀಡಾದ ಯುವಕನೊಬ್ಬ ವಿಪರೀತ ರಕ್ತಸ್ರಾವದಿಂದಾಗಿ ಪ್ರಾಣ ಹೋಗುವ ಹಂತದಲ್ಲಿದ್ದರೆ, ಅಕ್ಕಪಕ್ಕದವರು ಸಹಾಯ ಮಾಡುವುದು ಬಿಟ್ಟು, ಫೋಟೋ ತೆಗೆಯುತ್ತಿದ್ದ ಹೇಯ ಕೃತ್ಯ ವರದಿಯಾಗಿದೆ. ಸಾರ್ವಜನಿಕರ ಈ ಬೇಜವಬ್ದಾರಿಯುತ ವರ್ತನೆಯಿಂದಾಗಿ ಆತನ ಪ್ರಾಣವೇ ಹೋಗಿದೆ.ಸತೀಶ್ ಪ್ರಭಾಕರ್ (25) ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು. ಭೋಸಾರಿ ಬಳಿ