ವ್ಯಕ್ತಿಯೊಬ್ಬ ಸೇಡು ತೀರಿಸಿಕೊಳ್ಳಲು ಹಾವಿನ ತಲೆಯನ್ನು ಕಚ್ಚಿ ಅದನ್ನು ಉಗುಳುವ ಮೊದಲು ಅಗಿದು ತಿಂದಿರುವ ವಿಲಕ್ಷಣ ಘಟನೆ ಉತ್ತರಪ್ರದೇಶದ ಹಾರ್ದೊಯಲ್ಲಿ ಶನಿವಾರ ನಡೆದಿದೆ. ಆ ಹಾವು ಅವನನ್ನು ಒಮ್ಮೆ ಕಚ್ಚಿರುವುದರಿಂದ ಈತ ಆ ಹಾವನ್ನೇ ಕಚ್ಚಿ ತಿಂದಿದ್ದಾನೆ. ಹಾವನ್ನು ಕಚ್ಚಿ ತಿಂದ ಈತ ಪ್ರಜ್ಞೆ ಕಳೆದುಕೊಂಡ ನಂತರ ಸ್ಥಳಿಯರು ಈತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸೋನೆಲಾಲ್ ಎಂಬ ಈ ವ್ಯಕ್ತಿಯು ತನ್ನ ಜಾನುವಾರುಗಳನ್ನು ಮೇಯಿಸುತ್ತಿರುವಾಗ ಈ ಹಾವು ತನಗೆ ಕಚ್ಚಿತ್ತು,