ನವದೆಹಲಿ: ಗಡಿಯಲ್ಲಿ ಭಯೋತ್ಪಾದಕರ ಅಟ್ಟಹಾಸದ ಕುರಿತು ಆಡಳಿತಾರೂಢ ಎನ್ ಡಿಎ ಮತ್ತು ವಿಪಕ್ಷ ಯುಪಿಎ ಪರಸ್ಪರ ಕೆಸರೆರಚಾಟ ನಡೆಸುತ್ತಲೇ ಇರುತ್ತವೆ. ಆದರೆ ಅಂಕಿ ಅಂಶವೊಂದರ ಪ್ರಕಾರ ಎನ್ ಡಿಎ ಅವಧಿಯಲ್ಲಿ ಯುಪಿಎಗೆ ಹೋಲಿಸಿದರೆ ಭಯೋತ್ಪಾದಕ ಚಟುವಟಿಕೆಗಳು ಕಡಿಮೆ ಎಂದು ಬಹಿರಂಗವಾಗಿದೆ.