ಟ್ವೀಟ್ ಮಾಡೋದು ಯಾರು? ರಾಹುಲ್ ಗಾಂಧಿ ಸತ್ಯ ಬಿಚ್ಚಿಟ್ಟರು!

ನವದೆಹಲಿ| Krishnaveni| Last Modified ಭಾನುವಾರ, 12 ನವೆಂಬರ್ 2017 (11:38 IST)
ನವದೆಹಲಿ: ರಾಹುಲ್ ಗಾಂಧಿ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡೋದು ಸ್ವತಃ ಅವರೇನಾ? ಅಥವಾ ಇನ್ಯಾರಾದರೂ ಮಾಡುತ್ತಾರಾ? ಈ ಪ್ರಶ್ನೆಗೆ ಸ್ವತಃ ರಾಹುಲ್ ಉತ್ತರಿಸಿದ್ದಾರೆ.
 
‘ರಾಜಕೀಯ ವಿಚಾರವಾಗಿ ಮಾಡುವ ಟ್ವೀಟ್ ಗಳನ್ನು ಸ್ವತಃ ನಾನೇ ಮಾಡುತ್ತೇನೆ. ಆದರೆ ಯಾರಾದರೂ ಬರ್ತ್ ಡೇ, ಹಬ್ಬಗಳ ಶುಭಾಷಯ ಕೋರಬೇಕೆಂದರೆ ನನ್ನದೇ 3-4 ಜನರ ತಂಡವಿದೆ. ನನ್ನೊಂದಿಗೆ ಚರ್ಚಿಸಿ ಅವರು ಟ್ವೀಟ್ ಮಾಡುತ್ತಾರೆ’ ಎಂದು ರಾಹುಲ್ ಸತ್ಯ ಬಹಿರಂಗಪಡಿಸಿದ್ದಾರೆ.
 
ಹಿಂದೊಮ್ಮೆ ತಮ್ಮ ಟ್ವಿಟರ್ ಖಾತೆಯ ನಿಖರತೆ ಬಗ್ಗೆ ವಿಪಕ್ಷಗಳು ಟೀಕೆ ಮಾಡಿದ್ದಾಗ ತಮ್ಮ ನೆಚ್ಚಿನ ನಾಯಿಯ ಫೋಟೋ ಹಾಕಿ ಇದುವೇ ನನ್ನ ಪರವಾಗಿ ಟ್ವೀಟ್ ಮಾಡುವುದು ಎಂದು ರಾಹುಲ್ ಲೇವಡಿ ಮಾಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :