ಚಿಲ್ಲರೆದರ (ಗ್ರಾಹಕ) ಹಣದುಬ್ಬರ ಇಳಿಯುತ್ತಿರುವ ಸಮಯದಲ್ಲೇ ಸಗಟು ದರ ಹಣದುಬ್ಬರ (ಡಬ್ಲ್ಯೂಪಿಐ) ಮತ್ತಷ್ಟು ಜಿಗಿದಿದೆ. ಮೇ ತಿಂಗಳ ಸಗಟು ದರ ಹಣದುಬ್ಬರ ಶೇ.15.88ಕ್ಕೆ ಜಿಗಿದಿದ್ದು ಸಾರ್ವಕಾಲಿಕ ಗರಿಷ್ಟ ಮಟ್ಟಕ್ಕೇರಿದೆ. ಏಪ್ರಿಲ್ ತಿಂಗಳಲ್ಲಿ ಶೇ.15.08ರಷ್ಟಿತ್ತು. 2021 ಮೇ ತಿಂಗಳಲ್ಲಿ ಶೇ.13.11ರಷ್ಟಿತ್ತು. 2021 ಮಾರ್ಚ್ ತಿಂಗಳಿಂದಲೂ ಸಗಟು ದರ ಹಣದುಬ್ಬರ ಎರಡಂಕಿ ದಾಟುತ್ತಲ್ಲೇ ಇದೆ. 14 ತಿಂಗಳ ಹಿಂದೆ ಹತ್ತರ ಗಡಿದಾಟಿದ್ದು, ತಿಂಗಳಿಂದ ತಿಂಗಳಿಗೆ ಏರುತ್ತಲೇ ಸಾಗಿ ಈಗ ಶೇ.16ರ ಗಡಿ ಸಮೀಪಿಸುತ್ತಿದೆ.