ಅತ್ಯಾಚಾರ ಆರೋಪಿಗೆ ಗ್ರಾಮಸ್ಥರು ಮಾಡಿದ್ದೇನು?

ಮೀರತ್| pavithra| Last Modified ಗುರುವಾರ, 8 ಏಪ್ರಿಲ್ 2021 (08:57 IST)
ಮೀರತ್ : ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಅತ್ಯಾಚಾರ ಆರೋಪಿಗೆ 2 ಲಕ್ಷ ರೂ. ಪಾವತಿಸಲು ಹೇಳಿ 3 ವರ್ಷಗಳ ಕಾಲ ಗಡಿಪಾರು ಮಾಡಿದ ಘಟನೆ ನಡೆದಿದೆ.

ಯುವಕ ಬಿಎ ಪದವೀಧರನಾಗಿದ್ದು, ನೆರೆಮನೆಯ ಹುಡುಗಿಯ ಜೊತೆ ಸಂಬಂಧದಲ್ಲಿದ್ದ. ಬಳಿಕ ಆಕೆಯ ಜೊತೆ ದೈಹಿಕ ಸಂಬಂಧ ಬೆಳೆಸಿದ ಕಾರಣ ಆಕೆ ಗರ್ಭ ಧರಿಸಿದ್ದಾಳೆ. ಈ ವಿಚಾರ ತಿಳಿದ ಯುವಕ ಭಯಗೊಂಡು ಆಕೆಗೆ ಮಾಡಿಸಿದ. ಇದರಿಂದ ಸಂತ್ರಸ್ತೆಯ ಆರೋಗ್ಯ ಹದಗೆಟ್ಟ ಕಾರಣ ಆಕೆ ಈ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾಳೆ.

ಈ ಪ್ರಕರಣವನ್ನು ವಿಲೇವಾರಿ ಮಾಡಲು ಪಂಚಾಯಿತಿ ಕರೆಸಲಾಗಿದ್ದು, ಅಲ್ಲಿ ಆರೋಪಿಗೆ  2ಲಕ್ಷ ರೂ ವಿಧಿಸಿ 3 ವರ್ಷಗಳ ಕಾಲ ಗಡಿಪಾರಿಗೆ ಆದೇಶಿಸಿದ್ದಾರೆ. ಆದರೆ ಈ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :