ನವದೆಹಲಿ: 2016 ರ ನವಂಬರ್ 8 ರಂದು ಯಾರೂ ಕೂಡಾ ಮರೆಯಲು ಸಾಧ್ಯವಿಲ್ಲ. ದಿಡೀರ್ ಎಂದು ಟಿವಿ ಪರದೆ ಮೇಲೆ ಕಾಣಿಸಿಕೊಂಡ ಪ್ರಧಾನಿ ಮೋದಿ ನಾಳೆಯಿಂದ 500 ಮತ್ತು 1000 ನೋಟು ಚಲಾವಣೆ ಇರಲ್ಲ ಎಂದ ದಿನವದು. ಹೀಗೆ ನೋಟು ನಿಷೇಧ ವಿಚಾರವನ್ನು ಕೇಂದ್ರ ಸರ್ಕಾರ ಅಷ್ಟೊಂದು ಗೌಪ್ಯವಾಗಿರಿಸಿದ್ದೇ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಇದನ್ನು ಅಷ್ಟೊಂದು ಗೌಪ್ಯ ಮಾಡಿದ್ದರ ಹಿಂದಿನ ಕಾರಣವೇನೆಂಬುದನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಬಿಚ್ಚಿಟ್ಟಿದ್ದಾರೆ.ಒಂದು