ಕೋಲ್ಕತ್ತಾ : ಗೋಮಾಂಸ ಸೇವನೆ ನಿಷೇಧಿಸುವ ಕುರಿತು ದೇಶದಾದ್ಯಂತ ಬಾರೀ ಚರ್ಚೆಗಳು ನಡೆಯುತ್ತಿರುವ ಈ ವೇಳೆ ಇದೀಗ ಬಿಜೆಪಿ ನೇತಾರರೊಬ್ಬರು ಹಿಂದೂಗಳು ಮೇಕೆ ಮಾಂಸವನ್ನು ತಿನ್ನುವುದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ಅವರು ಮಹಾತ್ಮ ಗಾಂಧೀಜಿಯವರು ಮೇಕೆಯನ್ನು ಮಾತೆ ಎಂದು ಕರೆಯುತ್ತಿರುವ ಕಾರಣ ಹಿಂದೂಗಳು ಅದನ್ನು ತಿನ್ನುವುದನ್ನು ಬಿಡಬೇಕು ಎಂದು ಟ್ವೀಟ್ ಮಾಡಿ ಆಶ್ಚರ್ಯವನ್ನುಂಟುಮಾಡಿದ್ದಾರೆ. ಗಾಂಧೀಜಿ ಅವರು ಕೊಲ್ಕತ್ತಾದ ವುಡ್ಬರ್ನ್ ಪಾರ್ಕ್