ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿರುವ ಡಾ.ಉಮೇಶ್ ಜಾಧವ್ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.ಡಾ.ಉಮೇಶ್ ಜಾಧವ್ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಹಾಗೂ ಮಾಜಿ ಶಾಸಕರಾಗಿದ್ದಾರೆ. ನಿನ್ನೆಯಿಂದ ಮುಂಬೈ ಪ್ರವಾಸದಲ್ಲಿರುವ ಮಾಜಿ ಶಾಸಕ ಡಾ.ಉಮೇಶ್ ಜಾಧವ್ ಮುಂಬೈನಲ್ಲಿ ನೆಲೆಸಿರುವ ಚಿಂಚೋಳಿ ಮೂಲದ ಮತದಾರರ ಭೇಟಿಯಾಗುತ್ತಿದ್ದಾರೆ.ಜಾಧವ್ ಮಗ ಡಾ.ಅವಿನಾಶ್ ಜಾಧವ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದು, ಬೆಂಬಲಿಸುವಂತೆ ಮುಂಬೈ ಮೂಲದ ಮತದಾರರಿಗೆ ಮನವಿ ಮಾಡುತ್ತಿದ್ದಾರೆ. ಡಾ.ಅವಿನಾಶ್ ಜಾಧವ್ ಸಧ್ಯ