ಹೈದರಾಬಾದ್ : ಬಿಜೆಪಿ ಗೋ ರಕ್ಷಣೆಗೆ ಯಾವುದೇ ಬೆಂಬಲ ನೀಡುತ್ತಿಲ್ಲ ಎಂದು ಆರೋಪಿಸಿ ತೆಲಂಗಾಣ ಬಿಜೆಪಿ ಶಾಸಕರೊಬ್ಬರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಕೀಯ ಸ್ಥಾನಮಾನಕ್ಕಿಂತ ಮಿಗಿಲಾದದ್ದು ಬೇರೆ ಇಲ್ಲ ಎಂದುಕೊಂಡಿರುವ ನಾಯಕರಿರುವ ಈ ಕಾಲದಲ್ಲಿ ಇದೀಗ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಲೋಧ್ ಅವರು ನನಗೆ ಹಿಂದು ಧರ್ಮ ಮತ್ತು ಗೋ ರಕ್ಷಣೆ ಮೊದಲ ಆದ್ಯತೆ. ರಾಜಕೀಯ ನಂತರ ಎಂದು ಹೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.