ನವದೆಹಲಿ: ಅರುಣ್ ಜೇಟ್ಲಿ ವಿರುದ್ಧ ನಡೆಯುತ್ತಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ವಕೀಲರ ಬಿಲ್ ಪಾವತಿಸಲು ನನ್ನ ಸ್ವಂತ ಹಣ ಯಾಕೆ ಖರ್ಚು ಮಾಡಬೇಕು ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಅರುಣ್ ಜೇಟ್ಲಿ ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಭಾರೀ ಅಕ್ರಮದಲ್ಲಿ ತೊಡಗಿದ್ದಾರೆ. ಇದರ ಬಗ್ಗೆ ನಾನು ತನಿಖೆ ಮಾಡಲು ಮುಂದಾಗಿದ್ದಕ್ಕೆ ನನ್ನ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡಲಾಗಿತ್ತು. ಡಿಡಿಸಿಎ ಹಗರಣದ ತನಿಖೆ ವಿಚಾರವಾಗಿ ನ್ಯಾಯಾಲಯದ ಕಲಾಪಗಳಿಗೆ ನಾನೇಕೆ