ತಿರುವನಂತಪುರಂ: ಸಾಮಾನ್ಯವಾಗಿ ಕೇರಳ ಪ್ರವಾಹ ಎನ್ನುವ ಶಬ್ಧವನ್ನು ಕೇಳಿಯೇ ಇರಲಿಕ್ಕಿಲ್ಲ. ಹಾಗಿದ್ದರೂ ಈ ಬಾರಿ ಇಷ್ಟೊಂದು ನೆರೆ ಬಂದಿದ್ದು ಹೇಗೆ? ಇದಕ್ಕೆ ತಜ್ಞರು ಕಾರಣ ವಿಶ್ಲೇಷಿಸಿದ್ದಾರೆ.ಕೇರಳದ ಸುಮಾರು 35 ಕ್ಕೂ ಹೆಚ್ಚು ಡ್ಯಾಂಗಳು ಈ ವರ್ಷ ಉತ್ತಮ ಮಳೆಯಿಂದಾಗಿ ಶೇ. 85 ಕ್ಕಿಂತ ಹೆಚ್ಚು ಭರ್ತಿಯಾಗಿದ್ದವು. ಸಾಮಾನ್ಯವಾಗಿ ಜುಲೈ ತಿಂಗಳೊಳಗಾಗಿ ಡ್ಯಾಂಗಳು ಭರ್ತಿಯಾಗಿದ್ದರೆ ಜುಲೈ ಅಂತ್ಯಕ್ಕೆ ಮೊದಲೇ ನೀರು ಹೊರಬಿಡಬೇಕು.ಆದರೆ ಕೇರಳದಲ್ಲಿ ಈ ಬಾರಿ ಡ್ಯಾಂಗಳು ಭರ್ತಿಯಾಗಿದ್ದರೂ ನೀರು ಹೊರಬಿಟ್ಟಿರಲಿಲ್ಲ.