ನವದೆಹಲಿ: ಜನವರಿ 26 ರ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಮೆರವಣಿಗೆಗಳನ್ನು ಮಾಡುವುದರ ಜೊತೆಗೆ ಸ್ತಬ್ಧಚಿತ್ರಗಳನ್ನು ಸಾಗಿಸುತ್ತಾರೆ. ಈ ಸ್ತಬ್ಧಚಿತ್ರಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಬಂಗಾಳದ ಸ್ತಬ್ಧಚಿತ್ರವನ್ನು ಸರ್ಕಾರ ತಿರಸ್ಕರಿಸಿತ್ತು. ಇದರಿಂದ ಬೇಸರಗೊಂಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಯಾಕೆ ಬಂಗಾಳದ ಸ್ತಬ್ಧಚಿತ್ರವನ್ನು ಸರ್ಕಾರ ತಿರಸ್ಕರಿಸಿತು ಎಂದು ಪ್ರಶ್ನೆ ಮಾಡಿದ್ದಾರೆ. ಸಾವರ್ಜನಿಕರು ಒಟ್ಟಾಗಿದ್ದರೆ ಮಾತ್ರ ಶಾಂತಿಗೆ ಜಾಗವಿರುತ್ತದೆ ಎಂಬುದು ತಮ್ಮ ರಾಜ್ಯ ಸ್ತಬ್ಧಚಿತ್ರದ ಪರಿಕಲ್ಪನೆಯಾಗಿತ್ತು.ಈ ಕಾರಣಕ್ಕಾಗಿಯೇ ತಮ್ಮ ಸ್ತಬ್ಧಚಿತ್ರವನ್ನು ತಿರಸ್ಕಾರ ಮಾಡಲಾಯಿತೇ?