ನವದೆಹಲಿ: ಪ್ರಧಾನಿ ಮೋದಿ ತಮ್ಮ ಎಂದಿನ ಶೈಲಿಯಲ್ಲಿ ನಿನ್ನೆ ದಿಡೀರ್ ಆಗಿ ಇನ್ ಸ್ಟಾಗ್ರಾಂ, ಟ್ವಿಟರ್ ಖಾತೆಗಳಲ್ಲಿ ನಾನು ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾ ಪೇಜ್ ನಿಂದ ಹೊರಬರಲು ಚಿಂತನೆ ನಡೆಸಿದ್ದೇನೆ ಎಂದು ಸಂದೇಶ ಹಾಕಿದ್ದರು.ಪ್ರಧಾನಿ ಮೋದಿ ಇಂತಹದ್ದೊಂದು ಸಂದೇಶ ಹಾಕಿದ ತಕ್ಷಣ ಸಾವಿರಾರು ಸಂಖ್ಯೆಯಲ್ಲಿ ಕಾಮೆಂಟ್ ಗಳು ಬಂದಿದ್ದು, ದಯವಿಟ್ಟು ಬಿಡಬೇಡಿ ಎಂದು ಕೆಲವರು ಮನವಿ ಮಾಡಿದ್ದೂ ಇದೆ. ಆದರೆ ಸಾಮಾಜಿಕ ಜಾಲತಾಣಗಳ ಪ್ರಭಾವದ ಬಗ್ಗೆ ಸಕಾರಾತ್ಮಕ ಭಾವನೆ