ದೇಶಾದ್ಯಂತ ಡಿಜಿಟಲ್ ಇಂಡಿಯಾ ವ್ಯವಹಾರಕ್ಕೆ ಒತ್ತು ನೀಡಲಾಗುತ್ತಿದ್ದು, ಈ ಬಗ್ಗೆ ದೊಡ್ಡ ಮಟ್ಟದ ಪ್ರಚಾರವೇ ನಡೆಯುತ್ತಿದೆ. ಆದರೆ ಇದೇ ತಂತ್ರಜ್ಞಾನವನ್ನು ವಿದ್ರೋಹಿ ಸಂಘಟನೆಗಳು ದುರ್ಬಳಕೆ ಮಾಡುತ್ತಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿದ್ದು, ಪ್ರತಿನಿತ್ಯ ಕೋಟ್ಯಂತರ ರೂ. ವಂಚಿಸಲಾಗುತ್ತಿದೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಸೈಬರ್ ಅಪರಾಧದ ಮೂಲ ಬಹುತೇಕ ಉತ್ತರ ಭಾರತದ ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ, ದಿಲ್ಲಿ, ಒಡಿಶಾ ಆಗಿದೆ. ವಿದ್ರೋಹಿ ಸಂಘಟನೆಯಲ್ಲಿ ಗುರುತಿಸಿಕೊಂಡವರು ಆ