ಉತ್ತರ ಪ್ರದೇಶ : 55 ವರ್ಷದ ವ್ಯಕ್ತಿಯೊಬ್ಬ ಕಿರಿಯ ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಕಾರಣ ಆತನ ಪತ್ನಿ ಹಾಗೂ ಹಿರಿಯ ಸೊಸೆ ಸೇರಿ ಆತನನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಭಾದೋಹಿ ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಗೆ ನಾಲ್ವರು ಗಂಡುಮಕ್ಕಳಿದ್ದು ಅದರಲ್ಲಿ ಇಬ್ಬರಿಗೆ ವಿವಾಹವಾಗಿದೆ. ವ್ಯಕ್ತಿ ಕಿರಿಯ ಮಗನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದ ಪತ್ನಿ ಮತ್ತು ಹಿರಿಯ ಸೊಸೆ ವಿರೋಧ ವ್ಯಕ್ತಪಡಿಸಿದ್ದಾರೆ.