ಪ್ರಿಯಕರನ ಜೊತೆ ಸೇರಿಕೊಂಡು ಮಾಜಿ ಯೋಧನ ಕೊಂದ ಪತ್ನಿ

ಲಕ್ನೋ| Krishnaveni K| Last Modified ಗುರುವಾರ, 8 ಏಪ್ರಿಲ್ 2021 (08:48 IST)
ಲಕ್ನೋ: ಪ್ರಿಯಕರನ ಜೊತೆ ಸೇರಿಕೊಂಡು ಮಾಜಿ ಯೋಧನನ್ನು ಆತನ ಪತ್ನಿಯೇ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
 

ಮೃತ ವ್ಯಕ್ತಿಗೆ ತನ್ನ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಹಿನ್ನಲೆಯಲ್ಲಿ ಈ ಕೃತ್ಯವೆಸಗಲಾಗಿದೆ ಎನ್ನಲಾಗಿದೆ. ಯೋಧನ ಪತ್ನಿ ಆಕೆಯ ಸ್ನೇಹಿತನೊಂದಿಗೇ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು.
 
ಈ ಘಟನೆ ಮಾರ್ಚ್ 4 ರಂದೇ ನಡೆದಿತ್ತು. ಆದರೆ ಬಳಿಕ ಆರೋಪಿಗಳು ಇದೊಂದು ಕಾರು ಆಕ್ಸಿಡೆಂಟ್ ಎಂದು ಬಿಂಬಿಸಲು ಯತ್ನಿಸಿದ್ದರು. ಆದರೆ ಘಟನೆ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದ ಪೊಲೀಸರಿಗೆ ಸತ್ಯ ತಿಳಿದುಬಂದಿತ್ತು. ಸೇನೆಯಿಂದ ನಿವೃತ್ತಿ ಪಡೆದು ಯೋಧ ಈಗ ಖಾಸಗಿ ಕಂಪನಿಯೊಂದರಲ್ಲಿ ನೌಕರಿ ಮಾಡುತ್ತಿದ್ದ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :