ಪತ್ನಿ ಪೀಡಕರ ಪಟ್ಟಿ ನವದೆಹಲಿ ನಂಬರ್‍ ಒನ್‍

ನವದೆಹಲಿ| Hanumanthu.P| Last Modified ಸೋಮವಾರ, 4 ಡಿಸೆಂಬರ್ 2017 (18:20 IST)
ದೇಶದಲ್ಲಿ ವಿವಾಹಿತರ ಮೇಲೆ ಗಂಡಂದಿರಿಂದ ನಡೆಯುವ ಕ್ರೂರ ಕೃತ್ಯಗಳಲ್ಲಿ ನವದೆಹಲಿ ನಂಬರ್‍‍ ಒನ್‍‍ ಸ್ಥಾನದಲ್ಲಿದೆ ಎಂಬುದು ರಾಷ್ಟ್ರೀಯ ದಾಖಲೆಗಳ ಮಂಡಳಿ ಬಿಡುಗಡೆ ಮಾಡಿರುವ ಪಟ್ಟಿಯಿಂದ ಬಯಲಾಗಿದೆ.
ನವದೆಹಲಿ ವಿವಾಹಿತ ಮಹಿಳೆಯರಿಗೂ ಸುರಕ್ಷಿತವಲ್ಲ ಎಂಬುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ ಅಂಕಿ-ಅಂಶಗಳು ತಿಳಿಸಿವೆ. ಪತ್ನಿ ಪೀಡಕರ ಪಟ್ಟಿಯಲ್ಲಿ ಹೈದರಾಬಾದ್‍‍ ಹಾಗೂ ಜೈಪುರ ನಂತರದ ಸ್ಥಾನದಲ್ಲಿವೆ.
ಕಳೆದ ವರ್ಷ ದೇಶದಲ್ಲಿ ಒಟ್ಟು 12218 ಪತ್ನಿ ಪೀಡನೆಯ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 3645 ಪ್ರಕರಣಗಳು ನವದೆಹಲಿಯಲ್ಲಿ ವರದಿಯಾಗಿವೆ. ಹೈದರಾಬಾದ್‍‍ನಲ್ಲಿ 1311 ಹಾಗೂ ಜೈಪುರದಲ್ಲಿ 1008 ಪ್ರಕರಣಗಳು ದಾಖಲಾಗಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :