ಗಂಡನ ಕೊಂದು ಮಕ್ಕಳೊಂದಿಗೆ ತಾನೂ ಬಾವಿಗೆ ಹಾರಿದ ಪತ್ನಿ

ರಾಯ್ಪುರ| Krishnaveni K| Last Modified ಬುಧವಾರ, 6 ಜನವರಿ 2021 (09:40 IST)
ರಾಯ್ಪುರ: ಬೆಳ್ಳಂ ಬೆಳಗ್ಗಿನ ಜಾವ ಗಂಡನ ಮಚ್ಚಿನಿಂದ ಹತ್ಯೆ ಮಾಡಿ ಮಹಿಳೆಯೊಬ್ಬಳು ಮೂವರು ಮಕ್ಕಳೊಂದಿಗೆ ತಾನೂ ಬಾವಿಗೆ ಹಾರಿ ಸ್ವಯಂ ಹತ್ಯೆ ಮಾಡಲೆತ್ನಿಸಿದ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.

 
ಈಕೆ ಮಾನಸಿಕವಾಗಿ ಅಸ್ವಸ್ಥಳು ಎನ್ನಲಾಗಿದೆ. ಜೊತೆಗೆ ಇವರ ವೈವಾಹಿಕ ಜೀವನದಲ್ಲೂ ಸಮಸ್ಯೆಗಳಿತ್ತು. ಇದರಿಂದಾಗಿ ಮಲಗಿದ್ದ ಗಂಡನನ್ನು ಮಚ್ಚಿನಿಂದ ಹತ್ಯೆ ಮಾಡಿ ಬಳಿಕ ನಾಲ್ಕು, ಎರಡು ವರ್ಷದ ಮತ್ತು ಒಂದು ವರ್ಷದ ಮಕ್ಕಳೊಂದಿಗೆ ಪಕ್ಕದ ಬಾವಿಗೆ ಹಾರಿ ಜೀವ ಕಳೆದುಕೊಂಡಿದ್ದಾಳೆ. ಮಕ್ಕಳ ಚೀರಾಟ ಕೇಳಿ ಸ್ಥಳೀಯರು ನಾಲ್ವರನ್ನೂ ರಕ್ಷಿಸಿದ್ದಾರೆ. ಸದ್ಯಕ್ಕೆ ಆರೋಪಿ ಮಹಿಳೆಯನ್ನು ಕೌನ್ಸೆಲಿಂಗ್ ಗೆ ಕಳುಹಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :