ಇಂದು ಚೆನ್ನೈಗೆ ಭೇಟಿ ನೀಡುವ ಅಮಿತ್ ಶಾ ರಜನೀಕಾಂತ್ ರನ್ನು ಭೇಟಿ ಮಾಡ್ತಾರಾ?

ಚೆನ್ನೈ| pavithra| Last Modified ಶನಿವಾರ, 21 ನವೆಂಬರ್ 2020 (13:10 IST)
ಚೆನ್ನೈ : ತಮಿಳು ನಾಡಿನಲ್ಲಿ ಅಮಿತ್ ಶಾ ರಾಜಕೀಯ ರಣತಂತ್ರ ರೂಪಸಿಲು ಮುಂದಾಗಿದ್ದು, ಇಂದು ಚೆನ್ನೈಗೆ ಭೇಟಿ ನೀಡುವುದರ ಮೂಲಕ ಹಲವು ಪ್ರಶ್ನೆಗಳು ಮೂಡಲು ಕಾರಣರಾಗಿದ್ದಾರೆ.

ಈಗಾಗಲೇ ತಮಿಳುನಾಡಿನಲ್ಲಿ ಬಿಜೆಪಿ ಖುಷ್ಬೂ ಅವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಂಡಿದೆ. ಜೊತೆಗೆ ಅಣ್ಣಾ ಮಲೈ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದೀಗ ಇಂದು ಚೆನ್ನೈ ಗೆ ಭೇಟಿ ಮಾಡುತ್ತಿರುವ ಅಮಿತ್ ಶಾ ರಜನೀಕಾಂತ್ ಅವರನ್ನು ಭೇಟಿಯಾಗುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಅಮಿತ್ ಶಾ ಇಂದು ಎಐಎಡಿಎಂಕೆ ನಾಯಕರ ಜತೆ ಸಭೆ ನಡೆಸಲಿದ್ದಾರೆ. ಇದೇ ವೇಳೆ ಅವರು ರಜನೀಕಾಂತ್ ಜತೆಗೂ ಚರ್ಚೆ ಮಾಡುತ್ತಾರಾ? ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ರಜನಿಕಾಂತ್ ಭೇಟಿ ಮಾಡಲ್ಲ ಎಂದು ಬಿಜೆಪಿ ಪಕ್ಷ ತಿಳಿಸಿದೆ.  

ಹಾಗೇ ಇಂದು ಅಮಿತ್ ಶಾ ರನ್ನು ಅಣ್ಣ ಅಳಗಿರಿ ಭೇಟಿ ಮಾಡಲಿದ್ದು, ಬಳಿಕ ಡಿಎಂಕೆ ಸ್ಟಾಲಿನ್ ಗೆ ಟಕ್ಕರ್ ನೀಡಲು ಹೊಸ ಪಕ್ಷ ಘೋಷಣೆ ಮಾಡುತ್ತಾರಾ? ಎಂಬ ಪ್ರಶ್ನೆ ಮೂಡಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :