ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಐದೇ ದಿನಗಳಲ್ಲಿ ಕೋಟ್ಯಂತರ ಫಾಲೋವರ್ಸ್ ಸಂಪಾದಿಸಿ, ಆಡಳಿತಾರೂಢ ಬಿಜೆಪಿಯ ಇನ್ಸ್ಟಾಗ್ರಾಮ್ ಖಾತೆಯನ್ನೇ ಹಿಂದಿಕ್ಕಿ ಇಂಟರ್ನೆಟ್ ಜಗತ್ತನ್ನು ತಲ್ಲಣಗೊಳಿಸಿರುವ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party - CJP) ಈಗ ಕೇವಲ ಮೀಮ್ಸ್ ಅಥವಾ ಹಾಸ್ಯಕ್ಕೆ ಸೀಮಿತವಾಗಿ ಉಳಿದಿಲ್ಲ. ಈ ಆನ್ಲೈನ್ ಆಂದೋಲನವು ಈಗ ಭಾರತದ ನೇರ ಚುನಾವಣಾ ರಾಜಕೀಯಕ್ಕೆ ಧುಮುಕಲು ಗಂಭೀರವಾಗಿ ಚಿಂತಿಸುತ್ತಿದೆ ಎಂಬ ಅತ್ಯಂತ ರೋಚಕ ಸುದ್ದಿಗಳು ಹೊರಬರುತ್ತಿವೆ. ಆರಂಭದಲ್ಲಿ ಕೇವಲ ಡಿಜಿಟಲ್