ನಾನು ಹಿಂದುಳಿದವ ಎಂದು ಮೋದಿ ಹೇಳಿಕೊಳ್ತಾನೆ. ಆದ್ರೆ ಮೋದಿ ಪ್ರಧಾನಿಯಾಗಿ ಹಿಂದುಳಿದವರಿಗೆ ಏನು ಪ್ರಯೋಜನ ಆಗಿದೆ? ಮೋದಿ ಎಲ್ಲವನ್ನೂ ಶ್ರೀಮಂತರಿಗಾಗಿಯೇ ಮಾಡಿದ್ದಾನೆ. ಹೀಗಂತ ಏಕವಚನದಲ್ಲಿ ಪ್ರಧಾನಿ ವಿರುದ್ಧ ಖರ್ಗೆ ಗುಡುಗಿದ್ದಾರೆ.ಚಿಂಚೋಳಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕೊಡದೂರು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದು, ನಾನು ಕಿರುಕುಳ ಕೊಟ್ಟದ್ದಕ್ಕೆ ಪಕ್ಷ ಬಿಟ್ಟಿದ್ದಾಗಿ ಉಮೇಶ್ ಜಾಧವ್ ಹೇಳ್ತಾನೆ. ನಾನು ಆತನಿಗೆ ಕಿರುಕುಳ ಕೊಡೋ ಪ್ರಶ್ನೆಯೇ ಬರೋಲ್ಲ.