ಹೈದರಾಬಾದ್: ಟಿಡಿಪಿ ಜತೆ ಮೈತ್ರಿ ಕಳೆದುಕೊಂಡು ಬರಿದಾಗಿರುವ ಬಿಜೆಪಿ ಸಹಾಯಕ್ಕೆ ಪವನ್ ಕಲ್ಯಾಣ್ ಬರುತ್ತಾರಾ? ಈ ಬಗ್ಗೆ ಮಾಧ್ಯಮಗಳಿಗೆ ನಟ, ಜನ ಸೇನಾ ಪಕ್ಷದ ನೇತಾರ ಪವನ್ ಕಲ್ಯಾಣ್ ಉತ್ತರಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಪವನ್ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಆದರೆ ಇತ್ತೀಚೆಗೆ ಅವರಿಗೆ ಬಿಜೆಪಿ ಮೇಲೆ ಒಲವಿಲ್ಲ. ಮೊನ್ನೆಯಷ್ಟೇ ಕೇಂದ್ರದ ಮೇಲೆ ಹರಿಹಾಯ್ದಿದ್ದರು.ಹೀಗಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಬಿಲ್ ಕುಲ್ ಇಲ್ಲ ಎಂದಿದ್ದಾರೆ.