ನವದೆಹಲಿ-ಅಸೆಂಬ್ಲಿಯಲ್ಲಿ ಮೋಡಿ ಮಾಡಿದ್ದ ಕಾಂಗ್ರೆಸ್ಗೆ ೧೩೫ ಸ್ಥಾನಗಳು ಸಿಕ್ಕಿದ್ದವು.ಯಕಚ್ಚಿತ್ ಅದೇ ರೀತಿಯಾಗಿ ಕರ್ನಾಟಕದಲ್ಲಿ ಕೈ ಸರ್ಕಾರ ಅಧಿಕಾರವನ್ನು ರಚಿಸಿತ್ತು. ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯ ಜೋಡೆತ್ತುಗಳಂತೆ ದರ್ಬಾರ್ ನಡೆಸಿದ್ದಾರೆ.ಅದೇ ರೀತಿಯಾಗಿ ಇತ್ತಾ ಬಿಜೆಪಿಯಲ್ಲಿಯೂ ಕೂಡ ಜೋಡೆತ್ತುಗಳ ಜೋಡಿ ಅಕ್ಷರಶಃ ಮೋಡಿ ಮಾಡಿಯೇ ಬಿಟ್ಟಿದೆ.ಬಿಜೆಪಿ ಹೈಕಮಾಂಡ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹಲವು ತಿಂಗಳುಗಳ ಬಳಿಕ ವಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರನ್ನು ನೇಮಿಸಿ, ಸ್ವತಃ ರಾಜ್ಯ ಬಿಜೆಪಿಯ ನಾಯಕರಿಗೆ ಬಿಗ್ಶಾಕ್ ನೀಡಿತ್ತು.ಹೀಗೆ ರಾಜ್ಯ ರಾಜಕಾರಣದಲ್ಲಿ ಆ ಕಡೆ ಕಾಂಗ್ರೆಸ್ ಮತ್ತು ಈ ಕಡೆ ಬಿಜೆಪಿಯಲ್ಲಿ ಏನೇನು ಸರಿಯಿಲ್ಲ ಅನ್ನೋದು ಈ ಕ್ಷಣದವರೆಗೂ ಆಗ್ತಾ ಬಂದಿದೆ.