ನವದೆಹಲಿ: ಕೇಂದ್ರ ಗೃಹಸಚಿವಾಲಯ ಬಿಹಾರ್ ಮಾಜಿ ಸಿಎಂ, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಝಡ್ ಶ್ರೇಣಿ ಭದ್ರತೆಯನ್ನು ಹಿಂಪಡೆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಲಾಲು ಪುತ್ರ ತೇಜ್ ಪ್ರತಾಪ್, ತಂದೆಗೇನಾದ್ರೂ ಅನಾಹುತವಾದಲ್ಲಿ ಪ್ರಧಾನಿ ಮೋದಿಯ ಚರ್ಮ ಸುಲಿಯುತ್ತೇವೆ ಎಂದು ಗುಡುಗಿದ್ದಾರೆ.