Widgets Magazine

ಮದ್ಯ ಖರೀದಿಸಲು ಹಣ ನೀಡಲಿಲ್ಲವೆಂದು ಪತ್ನಿಗೆ ಪತಿ ಹೀಗಾ ಮಾಡೋದು?

ಪುಣೆ| pavithra| Last Modified ಶನಿವಾರ, 28 ನವೆಂಬರ್ 2020 (09:21 IST)
ಪುಣೆ : ಮದ್ಯ ಖರೀದಿಸಲು ಪತ್ನಿ ನೀಡಲಿಲ್ಲವೆಂದು ವ್ಯಕ್ತಿಯೊಬ್ಬ ಆಕೆಯನ್ನು ತವಾದಿಂದ ಹೊಡೆದು ಕೊಂದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಆರೋಪಿ ಕುಡಿತದ ದಾಸನಾಗಿದ್ದು, ಮದ್ಯ ಖರೀದಿಸಲು ಪತ್ನಿಯ ಬಳಿ ಹಣ ಕೇಳಿದ್ದಾನೆ, ಆದರೆ ಪತ್ನಿ ಹಣ ನೀಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಹುರಿಯಲು ಬಳಸುವ ತವಾದಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಆಕೆ ಅಲ್ಲೇ ಸಾವನಪ್ಪಿದ್ದಾಳೆ.

ಈ ಬಗ್ಗೆ ಹದಪ್ಪರ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :