ಸಿಎಂ ಬಿ.ಎಸ್.ಯಡಿಯೂರಪ್ಪನವರು ದೆಹಲಿ ಪ್ರವಾಸ ಕೈಗೊಂಡಿರುವುದು ಹಲವು ಅನುಮಾನ ಹಾಗೂ ರಾಜಕೀಯ ಚರ್ಚೆಗೆ ಕಾರಣವಾಗುತ್ತಿದೆ. ಹೈಕಮಾಂಡ್ ಭೇಟಿ ಮಾಡಿ ಸಚಿವ ಸಂಪುಟ ರಚನೆ ಇಲ್ಲವೇ ಪುನರಚನೆಗಾಗಿ ಗ್ರೀನ್ ಸಿಗ್ನಲ್ ಪಡೆಯೋದಕ್ಕೆ ಅಂತ ಸಿಎಂ ದೆಹಲಿಗೆ ಹೋಗಿದ್ದಾರೆ. ಆದರೆ ದೆಹಲಿಯಲ್ಲಿ ಸಿಎಂ ಇರುವ ವೇಳೆಯಲ್ಲಿಯೇ ಇತ್ತ ರಾಜ್ಯದಲ್ಲಿ ಸಿಎಂ ಕುರ್ಚಿ ಬದಲಾಗುತ್ತದೆ ಎಂದು ಚರ್ಚೆ ಜೋರಾಗಿ ನಡೆಯುತ್ತಿದೆ. ಲಿಂಗಾಯತ ಸಮುದಾಯದ ಪ್ರಮುಖ ನಾಯಕರ ಹೆಸರುಗಳನ್ನು ಹೈಕಮಾಂಡ್ ಮುಂದಿನ ಸಿಎಂ ಹುದ್ದೆಗೆ ಪರಿಗಣಿಸುವ