ಮಾಡೆಲ್ ವಿರುದ್ಧ ಅತ್ಯಾಚಾರ, ವಂಚನೆ ಕೇಸ್

ಮುಂಬೈ| Jaya| Last Updated: ಗುರುವಾರ, 15 ಸೆಪ್ಟಂಬರ್ 2016 (15:05 IST)
ಮುಂಬೈ ಮೂಲದ 30 ವರ್ಷದ ಮಹಿಳೆಯೋರ್ವಳು ಪ್ರಖ್ಯಾತ ಮಾಡೆಲ್ ಒಬ್ಬರ ಮೇಲೆ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಿದ್ದಾಳೆ. 
ಫೋಟೋ ಶೇರಿಂಗ್ ಸ್ಮಾರ್ಟ್‌ಫೋನ್ ಆ್ಯಪ್ ಮೂಲಕ ನಮ್ಮಿಬ್ಬರಿಗೆ ಪರಿಚಯವಾಗಿತ್ತು. ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ವಂಚಸಲಾಗಿದೆ. ಸ್ವಲ್ಪ ದಿನ ಪ್ರೀತಿಯ ನಾಟಕವಾಡಿ ಬಳಿಕ ನಾನೆಷ್ಟು ಕರೆ ಮಾಡಿದರೂ ಆತ ಎತ್ತುತ್ತಿರಲಿಲ್ಲ. ಬಳಿಕವಷ್ಟೇ ಆತ ವಿವಾಹಿತನೆಂದು ಗೊತ್ತಾಯಿತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ. ಮಹಿಳೆ ಮೀರಾ ರಸ್ತೆ ನಿವಾಸಿಯಾಗಿದ್ದು, 36 ವರ್ಷದ ಆರೋಪಿ ಶಾಸ್ತ್ರಿ ನಗರದಲ್ಲಿ ವಾಸಿಸುತ್ತಾನೆ.
 
ದಾಖಲಾಗಿರುವ ಎಫ್ಐಆರ್ ಪ್ರಕಾರ ಇಬ್ಬರು ಮೊದಲು ಫೋನ್‌ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದ್ದಾರೆ. ಬಳಿಕ ಸ್ನೇಹ ಕುದುರಿದೆ. ಒಂದು ದಿನ ಆಕೆಯನ್ನು ತನ್ನ ಮನೆಗೆ ಕರೆದ ಆತ ಬಲವಂತವಾಗಿ ದೈಹಿಕ ಸಂಪರ್ಕವನ್ನು ಬೆಳೆಸಿದ್ದಾನೆ. ಬಳಿಕ ನಿನ್ನನ್ನು ಮದುವೆಯಾಗುವುದಾಗಿ ನಂಬಿಸಿದ ಆತ ವಿಷಯವನ್ನು ಯಾರಿಗೂ ಬಹಿರಂಗ ಪಡಿಸದಂತೆ  ಹೇಳಿದ್ದಾನೆ. ಬಳಿಕ ಸಹ ನಿನ್ನನ್ನು ಪ್ರೀತಿಸುತ್ತೇನೆ ಎನ್ನುತ್ತಿದ್ದ ಆತ ಆದಷ್ಟು ಬೇಗ ಮದುವೆಯಾಗುವುದಾಗಿ ಭರವಸೆ ಕೊಟ್ಟಿದ್ದಾನೆ.
 
ಆದರೆ ಜುಲೈ ತಿಂಗಳ ನಂತರ ಆರೋಪಿ ಆಕೆಯ ಕರೆಗಳನ್ನು ನಿರ್ಲಕ್ಷಿಸಿದ್ದಾನೆ. ಯಾವಾಗ ಆತ ವಿವಾಹಿತನೆಂಬುದು ಪೀಡಿತೆಗೆ ಅರಿವಾಯಿತೋ ಅವಳು ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :