ಅನೈತಿಕ ಸಂಬಂಧ: ಪತಿಗೆ ಪತ್ನಿ ಮಾಡಿದ್ದು ನೋಡಿದ್ರೆ ಬೆಚ್ಚಿ ಬೀಳುವುದು ಖಚಿತ

ಮಧುರೈ| Rajesh patil| Last Modified ಮಂಗಳವಾರ, 5 ಡಿಸೆಂಬರ್ 2017 (13:40 IST)
ಪತಿ ಅನೈತಿಕ ಸಂಬಂಧ ಹೊಂದಿದ್ದಾನೆ ಎನ್ನುವ ಆಕ್ರೋಶದಿಂದ ಪತ್ನಿ ಆತನ ಗುಪ್ತಾಂಗದ ಮೇಲೆ ಕುದಿಯುತ್ತಿರುವ ಎಣ್ಣೆಯನ್ನು ಸುರಿದ ಘಟನೆ ವರದಿಯಾಗಿದೆ.
ವೃತ್ತಿಯಲ್ಲಿ ಅಟೋಚಾಲಕನಾಗಿರುವ ಪತಿಯನ್ನು ಗಂಭೀರ ಗಾಯಗಳಿಂದಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
37 ವರ್ಷ ವಯಸ್ಸಿನ ಪತಿ ಎಂ.ಪರಮೇಶ್ವರನ್ ವಿರಾಟ್ಟಿಪಟ್ಟು ಪ್ರದೇಶದಲ್ಲಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದ. ಪತ್ನಿ ಶಶಿಕಲಾಗೆ ಇದರ ಬಗ್ಗೆ ಮಾಹಿತಿ ದೊರೆತು ಪ್ರತಿನಿತ್ಯ ಜಗಳವಾಡಲು ಆರಂಭಿಸಿದ್ದಳು. 
 
ಪತ್ನಿ ದಿನನಿತ್ಯ ಜಗಳವಾಡುವುದು ಕಂಡ ಪತಿ ಮನೆಗೆ ಬರುವುದನ್ನೇ ನಿಲ್ಲಿಸಿದ್ದಾನೆ. ಇದರಿಂದ ಪತ್ನಿ ಶಶಿಕಲಾ ಪತಿ ಪರಮೇಶ್ವರ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಪರಮೇಶ್ವರ್‌ಗೆ ವಾರ್ನಿಂಗ್ ನೀಡಿ ಮನೆಗೆ ಕಳುಹಿಸಿದ್ದಾರೆ. ಆದರೆ,ಪರಮೇಶ್ವರ್ ಕ್ಯಾರೆ ಎನ್ನದೆ ಅನೈತಿಕ ಸಂಬಂಧ ಮುಂದುವರಿಸಿದ್ದಾನೆ ಎನ್ನಲಾಗಿದೆ.
 
ಇದರಿಂದ ಬೇಸತ್ತ ಪತ್ನಿ ಶಶಿಕಲಾ, ಒಂದು ದಿನ ಪತಿಗೆ ಕರೆ ಮಾಡಿ ಇವತ್ತೊಂದು ರಾತ್ರಿ ನನ್ನೊಂದಿಗಿರಬಾರದಾ ಎಂದು ಪ್ರೀತಿಯಿಂದ ಮಾತನಾಡಿ ಆಹ್ವಾನ ನೀಡಿದ್ದಾಳೆ. ಪತ್ನಿಯ ಹಿತವಾದ ನುಡಿಗಳಿಗೆ ಮನಸೋತು ಮನೆಗೆ ಬಂದಿದ್ದಾನೆ. ಪತಿ ಮಲಗಿರುವುದು ಖಚಿತಪಡಿಸಿದ ನಂತರ ಆತನ ಗುಪ್ತಾಂಗದ ಮೇಲೆ ಕುದಿಯುವ ಎಣ್ಣೆ ಸುರಿದಿದ್ದಾಳೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 


ಇದರಲ್ಲಿ ಇನ್ನಷ್ಟು ಓದಿ :