ಲಕ್ನೋ: ಸಂಜೆ 7 ಗಂಟೆಯ ಮೇಲೆ ಮಹಿಳಾ ಉದ್ಯೋಗಿಗಳನ್ನು ಕಚೇರಿಯಲ್ಲೇ ಕೂರಿಸಿಕೊಂಡು ಕೆಲ ಮಾಡಿಸುವಂತಿಲ್ಲ! ಇಂತಹದ್ದೊಂದು ಆದೇಶ ಉತ್ತರ ಪ್ರದೇಶ ಸರ್ಕಾರ ಹೊರಡಿಸಿದೆ.ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಬಲವಂತವಾಗಿ ಸಂಜೆ 7 ಗಂಟೆಯ ಬಳಿಕ ಮತ್ತು ಬೆಳಿಗ್ಗೆ 6 ಗಂಟೆಯೊಳಗೆ ಕಚೇರಿಯಲ್ಲಿರಲು ಹೇಳುವಂತಿಲ್ಲ.ಒಂದು ವೇಳೆ ಮಹಿಳೆಯರೇ ಸ್ವಯಂಕೃತವಾಗಿ ಬಯಸಿ ರಾತ್ರಿ ಪಾಳಯದಲ್ಲಿ ಕೆಲಸ ಮಾಡಲು ಇಚ್ಛಿಸಿದರೆ ಮಾತ್ರ ಆಕೆಯಿಂದ ಲಿಖಿತ ಒಪ್ಪಿಗೆ ಪತ್ರ ಪಡೆದು, ಊಟೋಪಚಾರ ನೀಡಿ ಕೆಲಸ ಮಾಡಿಸಬಹುದು