ಮಗುವಿಗೆ ಹಾಲು ಕುಡಿಸು ಎಂದು ಪತಿ ಬೈದುದಕ್ಕೆ ಜಗಳಕ್ಕಿಳಿದ ಪತ್ನಿ ಕೋಪದ ಭರದಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಬೈಯಪ್ಪನಹಳ್ಳಿಯ ಕಗ್ಗದಾಸಪುರದಲ್ಲಿ ನಡೆದಿದೆ. ಮೃತ 32 ವರ್ಷದ ಕವಿತಾ ಮೂಲತಃ ಕಾರವಾರದವಳಾಗಿದ್ದು ಕಳೆದೆರಡು ವರ್ಷಗಳ ಹಿಂದೆ ಅಂತರ್ ಧರ್ಮೀಯ ಮಹಮದ್ ನಯಾಜ್ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದಳು. ಬಳಿಕ ದಂಪತಿಗಳು ಬೆಂಗಳೂರಿನಲ್ಲಿ ನೆಲೆಸಿದ್ದರು. ಇವರಿಗೆ 6 ತಿಂಗಳ ಮಗುವಿದೆ. ಭಾನುವಾರ ರಾತ್ರಿ ಮಗು ಹಸಿವಿನಿಂದ ಅಳುತ್ತಿದ್ದಾಗ ಪತಿ ನಯಾಜ್ ಅದಕ್ಕೆ