ಮುಂಬೈ:ತೆಂಗಿನ ಮರ ಬಿದ್ದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಮುಂಬೈನ ಚೆಂಬೂರ್ನಲ್ಲಿ ನಡೆದಿದೆ. ಮುಂಬೈ ನ ಚೆಂಬೂರ್ನ ಶುಶ್ರೂತ್ ಆಸ್ಪತ್ರೆಯ ಬಳಿ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಕಾಂಚನಾ ರಜತ್ನಾಥ್ ಎಂಬ ಮಹಿಳೆಯ ಮೇಲೆ ತೆಂಗಿನ ಮರ ಉರುಳಿ ಬಿದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅಧಿಕ ರಕ್ತಸ್ರಾವವಾಗಿ ಮಹಿಳೆ ಮೃತಪಟ್ಟಿದ್ದಾರೆ. ಕಾಂಚನಾ ರಜತ್ ನಾಥ್ ಟಿ ವಿ ವಾಹಿನಿಯೊಂದರಲ್ಲಿ ನಿರೂಪಕರಾಗಿದ್ದರು ಎನ್ನಲಾಗಿದೆ.