ಮುಂಬೈ: ಮಂಬೈನಲ್ಲಿ 25 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಪಾನಮತ್ತಳಾಗಿ ಸಾರ್ವಜನಿಕ ಸ್ಥಳಗಳಲ್ಲಿ ದಾರಿಹೋಕರಿಗೆ ಮನಬಂದಂತೆ ದೂಷಿಸಿದ್ದಲ್ಲದೇ ಉಪನಗರದ ಎಂಐಡಿಸಿ ಪೊಲೀಸ್ ಠಾಣೆಯೊಳಗೆ ಗಲಾಟೆ ಮಾಡಿ ಸೀಸೆಯೊಳಗಿನ ಬಿಯರ್ ಗಂಟಲಿಗಿಳಿಸಿದ್ದಕ್ಕಾಗಿ ದಂಡ ವಿಧಿಸಲಾಯಿತು. ಹೊಟೆಲ್ ಸ್ವಾಗತಕಾರಿಣಿಯಾಗಿದ್ದ ಸುನಿತಾ ಯಾದವ್ ಸೆ. 17ರಂದು ಕುಡಿದ ಮತ್ತಿನಲ್ಲಿ ಟ್ಯಾಕ್ಸಿ ಚಾಲಕನನ್ನು ವಾಚಾಮಗೋಚರವಾಗಿ ನಿಂದಿಸಿದರು. ಅವಳು ಚಾಲಕನನ್ನು ನಿಂದಿಸಿದ್ದಲ್ಲದೇ ದಾರಿಹೋಕರನ್ನು ಕೂಡ ನಿಂದಿಸತೊಡಗಿದಳು. ಚಾಲಕ ನೇರವಾಗಿ ಪೊಲೀಸ್ ಠಾಣೆಯ ಬಳಿ ಟ್ಯಾಕ್ಸಿಯನ್ನು ನಿಲ್ಲಿಸಿದ. ಅಲ್ಲೂ