ನವದೆಹಲಿ: ಬಯಸಿದ ಹುಡುಗನನ್ನು ತೋರಿಸಿಕೊಡದ ಮ್ಯಾಟ್ರಿಮೋನಿಯಲ್ ಸೈಟ್ ಒಂದರ ವಿರುದ್ಧ ಮಹಿಳೆಯೊಬ್ಬರು ಕೇಸು ದಾಖಲಿಸಿ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ!ಇದು ನಡೆದಿರುವುದು ರಾಷ್ಟ್ರ ರಾಜಧಾನಿಯಲ್ಲಿ. ಈಕೆ 2016 ರಲ್ಲಿ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಒಂದರ ಜತೆ 58,650 ರೂ. ನೀಡಿ ಒಪ್ಪಂದ ಮಾಡಿಕೊಂಡಿದ್ದರು.ಆದರೆ ತನಗೆ ಬೇಕಾದ ವರನನ್ನು ವೆಬ್ ಸೈಟ್ ಸಂಸ್ಥೆ ಹುಡುಕಿಕೊಡಲು ವಿಫಲವಾಗಿದೆ ಎಂದು ಪ್ರಕರಣ ದಾಖಲಿಸಿದ್ದ ಯುವತಿ ತಾನು ನೀಡಿದ ಫೀಸ್ ಜತೆಗೆ ಕಾನೂನು ಹೋರಾಟಕ್ಕೆ ವೆಚ್ಚವಾದ 5000 ರೂ.