ಜಗಳ ಆಡಿಲ್ಲ, ಪ್ರೀತಿ ಮಾಡ್ತಾನೆ ಅಂತ ಗಂಡನಿಗೆ ಡಿವೋರ್ಸ್ ಕೊಡೋದಾ!

ನವದೆಹಲಿ| Krishnaveni K| Last Modified ಭಾನುವಾರ, 23 ಆಗಸ್ಟ್ 2020 (09:22 IST)
ನವದೆಹಲಿ: ಜಗತ್ತಿನಲ್ಲಿ ಗಂಡ-ಹೆಂಡತಿ ಬೇರೆ ಬೇರೆಯಾಗಲು ಏನೆಲ್ಲಾ ವಿಚಿತ್ರ ಕಾರಣಗಳಿರುತ್ತವೆ ನೋಡಿ. ಇಲ್ಲೊಬ್ಬ ಮಹಿಳೆ ತನ್ನ ಗಂಡ ಜಗಳ ಮಾಡಿಲ್ಲ ಅಂತ ವಿಚ್ಛೇದನಕ್ಕೆ ಮುಂದಾಗಿದ್ದಾಳೆ.

 

ನನ್ನ ಗಂಡ ಕಳೆದ 18 ತಿಂಗಳಿನಿಂದ ಒಮ್ಮೆಯೂ ಜಗಳ ಆಡಿಲ್ಲ. ವಿಪರೀತ ಪ್ರೀತಿ ಮಾಡುತ್ತಾನೆ. ಇದರಿಂದ ನನಗೆ ಸಾಕಾಗಿ ಹೋಗಿದೆ ಎಂದು ವಿಚ್ಛೇದನಕ್ಕೆ ಮಹಿಳಾಮಣಿ ಕಾರಣ ನೀಡಿದ್ದಾಳೆ.
 
ಇದು ನಡೆದಿರುವುದು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ. ಆಕೆ ಈಗ ಶರಿಯಾ ಕೋರ್ಟ್ ಗೆ ಗಂಡನಿಂದ ಮುಕ್ತಿ ಕೊಡುವಂತೆ ಮನವಿ ಮಾಡಿದ್ದಾಳೆ. ಆತ ಮನೆ ಕೆಲಸವೆಲ್ಲಾ ಮಾಡುತ್ತಾನೆ. ನಾನು ಏನೇ ಅಂದರೂ ತಿರುಗಿ ಮಾತನಾಡಲ್ಲ. ಇದರಿಂದ ನನಗೆ ಉಸಿರುಗಟ್ಟಿದಂತಾಗುತ್ತದೆ. ಅವನ ಜತೆ ಬಾಳಲಾರೆ ಎಂದು ಮಹಿಳೆ ಅಲವತ್ತುಗೈದಿದ್ದಾಳೆ.
 
ಈಕೆಯ ಎಲ್ಲಾ ಪ್ರಲಾಪ ಕೇಳಿಸಿಕೊಂಡ ಶರಿಯಾ ಕೋರ್ಟ್ ಮುಖ್ಯಸ್ಥ ಕೊಡಲಾಗದು ಎಂದಿದ್ದಾರಂತೆ. ಇದರಿಂದ ಮಹಿಳೆ ಗ್ರಾಮದ ಮುಖ್ಯಸ್ಥರ ಬಳಿ ತೆರಳಿದ್ದು ಅವರೂ ಈ ವಿಚಾರದಲ್ಲಿ ತಲೆ ಹಾಕಲು ನಿರಾಕರಿಸಿದ್ದಾರೆ!
ಇದರಲ್ಲಿ ಇನ್ನಷ್ಟು ಓದಿ :