ಮಹಿಳೆ ತನ್ನ ಪ್ರಿಯಕರನೊಂದಿಗೆ ಪರಾರಿ! ಗ್ರಾಮಸ್ಥರು ಕೊಟ್ಟು ಶಿಕ್ಷೆಯಾದ್ರು ಏನು?!

ಗುಜರಾತ್| Ramya kosira| Last Modified ಶನಿವಾರ, 13 ನವೆಂಬರ್ 2021 (16:44 IST)


ಗುಜರಾತ್ ಪಟಾನ್ನಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಓಡಿ ಹೋದ ಕಾರಣ ಶಿಕ್ಷೆಯಾಗಿ ಗ್ರಾಮಸ್ಥರು ಆಕೆಯ ಮುಖಕ್ಕೆ ಮಸಿ ಬಳಿದು ಹಿಂಸೆ ನೀಡಿದ್ದಾರೆ.
ಅಲ್ಲಿನ ಗ್ರಾಮಸ್ಥರು ಆಕೆಯ ಮೇಲೆ ಎಸಗಿರುವ ಕೃತ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ತನ್ನನ್ನು ಬಿಡುವಂತೆ ಗ್ರಾಮಸ್ಥರೊಂದಿಗೆ ಅಳುತ್ತಾ ಮನವಿ ಮಾಡಿದ್ದಳು.
ಆದರೆ ಬುಡಕಟ್ಟು ಜನಾಂಗಕ್ಕೆ ಸೇರಿದ್ದ ಯುವತಿ ಓಡಿ ಹೋಗಿರುವುದು ತಮ್ಮ ಸಮುದಾಯದ ನಿಯಮ ಉಲ್ಲಂಘನೆ ಮಾಡಿದ್ದಾಳೆ. ಹೀಗಾಗಿ ಆಕೆಗೆ ಹಿಗ್ಗಾಮುಗ್ಗಾ ಥಳಿಸಿ, ನಂತರ ಮುಖಕ್ಕೆ ಮಸಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿದಂತೆಯೇ ಪೊಲೀಸ್ ವರಿಷ್ಠಾಧಿಕಾರಿ ಸುಪ್ರೀತ್ ಸಿಂಗ್ ಸ್ಥಳಕ್ಕಾಗಮಿಸಿ 15 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :