ಇಬ್ಬರು ಮಕ್ಕಳ ಕೊಂದು ನೇಣಿಗೆ ಶರಣಾದ ತಾಯಿ

ಹೈದರಾಬಾದ್| Krishnaveni K| Last Modified ಶುಕ್ರವಾರ, 9 ಜುಲೈ 2021 (09:54 IST)
ಹೈದರಾಬಾದ್: ಇಬ್ಬರು ಹೆಣ್ಣು ಮಕ್ಕಳ ಹತ್ಯೆ ಮಾಡಿ ತಾಯಿ ತಾನೂ ನೇಣಿಗೆ ಶರಣಾದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಅದೃಷ್ಟವಶಾತ್ ಮೂರನೇ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

 
ಗಂಡನ ಕಿರುಕುಳದಿಂದ ಬೇಸತ್ತ ಮಹಿಳೆ ಈ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನಲಾಗಿದೆ.  14 ವರ್ಷದ ಹಿಂದೆ ವಿವಾಹವಾಗಿದ್ದ ದಂಪತಿ ನಡುವೆ ವೈಮನಸ್ಯವಿತ್ತು ಎನ್ನಲಾಗಿದೆ.
 
ಮನೆಯ ಹೊರಗೆ ಮಲಗಿದ್ದ ಪತಿಗೆ ಒಳಗೆ ಕಿರುಚಾಟ ಕೇಳಿಬಂದಿತ್ತು. ಒಳಗೆ ಬಂದಾಗ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಜೀವ ಕಳೆದುಕೊಂಡಿದ್ದರು. ಆದರೆ ಮೂರು ವರ್ಷ ವಯಸ್ಸಿನ ಮಗಳ ಪ್ರಾಣ ಉಳಿದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :