ಮೃತ ತಾಯಿಯ ಕಳೇಬರದೊಂದಿಗೆ ದಿನಗಟ್ಟಲೆ ಕಳೆದ ಪುತ್ರಿ

ಮುಂಬೈ| Krishnaveni K| Last Modified ಸೋಮವಾರ, 23 ನವೆಂಬರ್ 2020 (09:38 IST)
ಮುಂಬೈ: ತಾಯಿ ಅಗಲಿದರೂ ಆಕೆಯ ಮೇಲಿನ ಪ್ರೀತಿಯಿಂದ ಶವ ಸಂಸ್ಕಾರ ಮಾಡದೇ ಆಕೆಯ ಶವದೊಂದಿದೇ ಪುತ್ರಿ ಜೀವನ ನಡೆಸುತ್ತಿದ್ದ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ.
 

83 ವರ್ಷ ವೃದ್ಧೆ ಮಾರ್ಚ್‍ ನಲ್ಲೇ ನಿಧನರಾಗಿದ್ದರು. ಆದರೆ ಅವರ 53 ವರ್ಷದ ಪುತ್ರಿ ಈ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ. ಅಷ್ಟೇ ಅಲ್ಲದೆ, ಆಕೆಯ ಶವ ಸಂಸ್ಕಾರವನ್ನೂ ಮಾಡದೇ ಅದರ ಜತೆಗೇ ಇಷ್ಟು ದಿನಗಳ ಕಾಲ ಜೀವನ ನಡೆಸಿದ್ದಳು. ಆಕೆ ತನ್ನ ಮನೆಯಿಂದ ಕಸ ಎಸೆಯುತ್ತಿದ್ದ ಬಗ್ಗೆ ನೆರೆಮನೆಯವರು ಪೊಲೀಸರಿಗೆ ದೂರು ನೀಡಿದಾಗಲೇ ಘಟನೆ ಬೆಳಕಿಗೆ ಬಂದಿರುವುದು. ಮನೆಗೆ ಬಂದು ವಿಚಾರಣೆ ನಡೆಸಿದಾಗ ಪೊಲೀಸರಿಗೆ ಶವ ಪತ್ತೆಯಾಗಿದ್ದು, ಅದನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ. ಮಹಿಳೆಯನ್ನು ವಶಕ್ಕೆ ಪಡೆದು ಆಕೆಯ ಮಾನಸಿಕ ಆರೋಗ್ಯ ಸ್ಥಿತಿ ಬಗ್ಗೆ ತಿಳಿಯಲು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :