ಹಿಟ್ಟಿನ ಗಿರಣಿಯಲ್ಲಿ ಸಿಲುಕಿದ ಮಹಿಳೆಯ ತಲೆಕೂದಲು: ಮುಂದೆ ಆಗಿದ್ದು ಭೀಕರ ದುರಂತ!

ನವದೆಹಲಿ| Krishnaveni K| Last Modified ಮಂಗಳವಾರ, 26 ಜನವರಿ 2021 (09:54 IST)
ನವದೆಹಲಿ: ಮಹಿಳೆಯರಿಗೆ ಜಡೆಯಿದ್ದರೇ ಸುಂದರ. ಆದರೆ ಇಲ್ಲೊಬ್ಬ ಮಹಿಳೆಗೆ ಅದುವೇ ಪ್ರಾಣಕ್ಕೆ ಸಂಚಕಾರ ತಂದಿದೆ. ಪಂಜಾಬ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.

 
ಹಿಟ್ಟಿನ ಗಿರವಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ತಲೆಕೂದಲು ಮಷಿನ್ ಮಧ್ಯೆ ಸಿಲುಕಿಕೊಂಡಿತು. ಮಷಿನ್ ಚಾಲೂ ಆಗಿದ್ದರಿಂದ ತಲೆ ಕೂದಲಿನ ಜೊತೆ ಆಕೆಯ ತಲೆಯೂ ಮಷಿನ್ ನೊಳಗೆ ಸಿಲುಕಿಕೊಂಡು ಪರಿಣಾಮ, ಆಕೆಯ ರುಂಡ ಮುಂಡ ಬೇರ್ಪಟ್ಟ ಧಾರುಣ ಘಟನೆ ನಡೆದಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತಾದರೂ ಜೀವ ಉಳಿಯಲಿಲ್ಲ.
ಇದರಲ್ಲಿ ಇನ್ನಷ್ಟು ಓದಿ :